Pages

Saturday, July 31, 2010

ನಾನು ನನ್ನದು - ಏನು ಇದರ ಮರ್ಮ?

ನಾನು ನಾನು ನಾನು, ಎಲ್ಲಿರುವೆ ನಾನು?
ಎಲ್ಲಡೆ ಕೇಳಿಸುವದು ಒಂದೇ ಮಾತು-ನಾನು-ನನ್ನದು, ಇದರ ಮರ್ಮವೇನು?

ಮನೆ ಯಾರದ್ದು? ನನ್ನದು. ಹಣ ಯಾರದ್ದು? ನನ್ನದು.
ಭೂಮಿ ಯಾರದ್ದು? ನನ್ನದು. ಎಲ್ಲವೂ ನನ್ನದು.
ಹೀಗೇಕೆ ಹೇಳಬಾರದು? ಇವೆಲ್ಲವನ್ನೂ ಕೊಟ್ಟ ಭಗವಂತನು ನನ್ನವನು.
ನನ್ನ ಒಳಗಿರುವನು. ನನ್ನೊಳಗಿರುವ ಭಗವಂತನು ಬೇರೆಯವರಲ್ಲಿಯೂ ಇರುವನು.
ಅವನೇ ನಾನು ನಾನೇ ಅವನು. ನಮ್ಮಿಬ್ಬರಲ್ಲಿ ವ್ಯತ್ಯಾಸವೇನು?
ಇದರ ಮರ್ಮವನ್ನು ಅರಿಯದೆ ಬದುಕಿದರೆ ಪ್ರಯೋಜನವೇನು?

ನಾನು ಎಂಬುದು ಅಹಂ ಆಗದೇ, ನಾನು ಎಂಬುವದು ಸೋಹಂ(ಸೊ- ದೈವ, ಅಹಂ)ಆದರೇ, ಒಳ್ಳೆಯದಲ್ಲವೇನು?