Pages

Friday, September 3, 2010

ಕವಿದಿದೆ ಮೌನ...

ಏಕೋ ಕಾಣೆ ಬಯಸದಿದ್ದರು ಕವಿದಿದೆ ಮೌನ!
ಒಡೆಯಲು ಪ್ರಯತ್ನಿಸಿದರೂ, ಒಡೆಯಲಿಲ್ಲ ಈ ಮೌನ.

ಹಾಡಲು ಪ್ರಯತ್ನಿಸಿದೆ ಹೃದಯದ ರಾಗ, ಹಾಡಲಾಗದೇ ಕವಿತೆಯ ರೂಪದಲ್ಲಿ ತಾಳಿತು ಮೌನ.
ಬರಿದೆ ನಾ ನೂರೆಂಟು ಕವಿತೆಯನು, ಅವು ಬಾಳೆಂಬ ಕವಿತೆಗೆ ಸಮವಾಗದೆ ಕವಿದವು ಮೌನ!
ದಾರಿ ಕಾಣದೆ, ಬಾಳೆಂಬ ಕವಿತೆಯಲ್ಲಿ ಮುಳುಗಿಹೋದೆ ತಾಳಲಾರದೆ ಮೌನ.
ಈಜಲು ಬಾರದೇ, ತೇಲಲು ಆಗದೇ, ನೊಂದು-ಬೆಂದು ಮತ್ತೆ ಕವಿಯಿತು ಈ ಮೌನ!

ಏಕೋ ಕಾಣೆ ಬಯಸದಿದ್ದರು ಕವಿಯುತ್ತಿದೆ ಈ ಮೌನ.
ಹಕ್ಕಿಗಳಿಂಚರದಿಂದ ಮನ ತಂಪಾಗಿಸಲು ಹೊರಗೆ ಹೋದರೆ, ಅಲ್ಲಿಯೂ ಕಾಡಿತ್ತು ಮೌನ!
ಸಾಗರದ ಬಳಿ ನಿಂತೆ, ಕೇಳಲು-ಸಾಗರದ ಇಂಚರ, ಅಲ್ಲಿಯೂ ಕಾಡಬೇಕೇ ಈ ಮೌನ?
ಏನು ಮಾಡಬೇಕೆಂದು ಅರಿಯದೇ ಆಗಿಬಿಟ್ಟೆ ನಾ ಮೌನ!

~ಅರ್ಚನಾ ಕುರಟ್ಟಿ