
ಎಲ್ಲೆಡೆ ಸುಗಂಧವನ್ನು ಚೆಲ್ಲುತ್ತ, ನನ್ನ ಮನವಸೆಳೆದೆನೀನು.
ನಿನ್ನ ಅತಿಯಾಗಿ ಹಚ್ಚಿಕೊಂಡಿರುವ, ಮೆಚ್ಚಿಕೊಂಡಿರುವ ನಿನ್ನ
ಪ್ರೀತಿಯ ಮುಳ್ಳು ನಾನು.
ಏಕೋ ಕಾಣೆ, ನಿನ್ನನಗಲಿ ಬದುಕಿರಲಾರೆ ನಾನು.
ನಿನ್ನ ಅಗುಲಿದ ಬದುಕೂ, ಒಂದು ಬದುಕೇನು?
ಬಿಸಿಲು-ಮಳೆಗೆ, ಬಿರುಗಾಳಿ-ಚಳಿಗೆ ರೋಸಿಹೋದೆಯೇನು?
ಚಿಂತಿಸಬೇಡ ಒಲವೇ; ಸದಾ ನಿನ್ನ ನೆರಳಾಗಿರುವೆ ನಾನು.
ನಮ್ಮಿಬ್ಬರ ಈ ಮಧುರ ಸಾಮಿಪ್ಯವನ್ನು ಸಹಿಸುವರುಂಟೇನು?
ಸಹಿಸದೇ ಹೋದರೇ ನನಗೇನು?
ನಮ್ಮಿಬ್ಬರನ್ನು ಅಗುಲಿಸಲು ಬಂದರೆ ಮಾತ್ರ,ಅವರ ಕೈ ಸೀಳದೇ ಬಿಡುವುದಿಲ್ಲ ನಾನು.
ಇತಿ ನಿನ್ನ ಪ್ರೀತಿಯ ಮುಳ್ಳು!
~ಅರ್ಚನಾ ಕುರಟ್ಟಿ