Pages

Tuesday, November 16, 2010

ಏಲ್ಲಿರುವಳೋ ಆ ಚೆಲುವೆ?























ಎಲ್ಲಿರುವಳೋ ಚೆಲುವೆ?
ಕನಸಿನಲ್ಲಿ ಕಂಡು ನಾ ಮೋಹಗೊಂಡಿರುವೆ.
ಬಿಲ್ಲಿನಂತ ಹುಬ್ಬು ಏರಿಸುತ್ತಾ,
ಮಿಂಚಿನಂತಹ ಕಣ್ಣು ಮಿಟಿಕಿಸುತ್ತ,
ಹುಸಿನಗೆಯ ಬೀರುತ್ತ ನನ್ನ ಮನಸೆಳೆದ ನಲ್ಲೆ.

ಲ್ಲಿರುವಳೋ ಚೆಲುವೆ?
ಮೆಲ್ಲ ಮೆಲ್ಲನೆ ಹೆಜ್ಜೆ ಇಕ್ಕುತ್ತ
ಮೆಲು ದ್ವನಿಯಲ್ಲಿ ಹಾಡುತ್ತ,
ಕೋಗಿಲೆಗೆ ಪ್ರತಿಸ್ಪರ್ಧಿ ನನ್ನ ಚೆಲುವೆ!

ಎಲ್ಲಿರುವಳೋ ಚೆಲುವೆ?
ನವಿಲಿನಂತೆ ನಾಟ್ಯವಾಡುವ ನಿರಾಭರಣ ಸುಂದರಿ
ಕೋಮಲವಾದ ಕೈಗಳಿಂದ ನನ್ನ ಕೆನ್ನೆಯ ಸ್ಪರ್ಶಿಸಿ, ಮಾಯವಾದ ಪ್ರಿಯ ಗೆಳತಿ.
ಹುಡುಕುತಿರುವೆ ಹಗಲಿರುಳು ನನ್ನ ಸಖಿಗಾಗಿ...

ಎಲ್ಲಿರುವಳೋ ಚೆಲುವೆ?
ಕನಸಿನಲ್ಲಿ ಕಂಡು ನಾ ಮೋಹಗೊಂಡಿರುವೆ.

~ಅರ್ಚನಾ ಕುರಟ್ಟಿ

No comments:

Post a Comment