ಮಾತು ಮಾತು ಮಾತು, ಯಾವುದು ಈ ಮಾತು?
ತಿಳಿಯದೇ ಪ್ರಾರಂಭವಾಗುವುದು ಈ ಮಾತು.
ಬಯಸಿದರೂ ನಿಲ್ಲಿಸಲಾಗದು ಈ ಮಾತು.
ಮಾತು ಮಾತನಾಡುತ್ತ ಮರೆತೇ ಹೋಯಿತು ನಾನು
ಹೇಳಲು ಬಯಸುತ್ತಿದ್ದ ಮಾತು.
ಮರೆತು ಹೋದ ಮಾತನ್ನ ಯೋಚಿಸುತ್ತಿದ್ದೆ,
ಅಷ್ಟರಲ್ಲೇ ಶುರುವಾಯಿತು ಬೇರೊಂದು ಮಾತು!
ಮಾತು ವರವೋ ಶಾಪವೋ? ಅರಿಯೆ ಈ ಮಾತು.
ಉತ್ತರ ಹುಡುಕುತ್ತಿದ್ದಾಗ, ಕಂಡುಕೊಂಡೆ ನಾ ಹೊಸದಲ್ಲದ ಈ ಮಾತು.
"ಮಾತು ಒಂದು ಕಲೆ, ಕಲೆಯೇ ಮಾತು."
"ಮಾತಿನಿಂದಲೇ ಉಪಚಾರ ಮಾತಿನಿಂದಲೇ ಅಪಚಾರ"
"ಮಾತಿನಿಂದಲೇ ಸರಸ, ಮಾತಿನಿಂದಲೇ ವಿರಸ."
"ಮಾತಿನಿಂದಲೇ ನಗು, ಮಾತಿನಿಂದಲೇ ಅಳು."
"ಮಾತಿನಿಂದಲೇ ಮಾತೆಯರು, ಮಾತೆಯರಿಂದಲೇ ಮಾತು."
ಹೀಗೆ ಮಾತು ಮಾತಿಂದಲೇ ಹರಡುವುದು ಗಾಳಿಮಾತು.
ಗಾಳಿ ಮಾತನ್ನ ನಂಬಿದರೇನು ಬಂತು?
ನಿಜ ಸಂಗತಿಯನ್ನ ತಿಳಿದುಕೊಂಡರೆ ಉಳಿಯುವುದು ಬಾಳನಂಟು.
ಇಲ್ಲದಿದ್ದರೆ ಕಷ್ಟಗಳು ಒದಗುವವು ನೂರೆಂಟು!
"ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು."
ಎಷ್ಟು ಸತ್ತ್ಯವಿದೆ ಅನುಭವಿಗಳ ಈ ಮಾತು!
ಹೀಗೆ ಮಾತು ಮಾತಾಡುತ್ತ ಕಾಲ ಉರುಳಿತು, ನನಗೆ ಮಾತೇ ಮರೆತು ಹೋಯಿತು!
~ಅರ್ಚನಾ ಕುರಟ್ಟಿ
ತಿಳಿಯದೇ ಪ್ರಾರಂಭವಾಗುವುದು ಈ ಮಾತು.

ಬಯಸಿದರೂ ನಿಲ್ಲಿಸಲಾಗದು ಈ ಮಾತು.
ಮಾತು ಮಾತನಾಡುತ್ತ ಮರೆತೇ ಹೋಯಿತು ನಾನು
ಹೇಳಲು ಬಯಸುತ್ತಿದ್ದ ಮಾತು.
ಮರೆತು ಹೋದ ಮಾತನ್ನ ಯೋಚಿಸುತ್ತಿದ್ದೆ,
ಅಷ್ಟರಲ್ಲೇ ಶುರುವಾಯಿತು ಬೇರೊಂದು ಮಾತು!
ಮಾತು ವರವೋ ಶಾಪವೋ? ಅರಿಯೆ ಈ ಮಾತು.
ಉತ್ತರ ಹುಡುಕುತ್ತಿದ್ದಾಗ, ಕಂಡುಕೊಂಡೆ ನಾ ಹೊಸದಲ್ಲದ ಈ ಮಾತು.
"ಮಾತು ಒಂದು ಕಲೆ, ಕಲೆಯೇ ಮಾತು."
"ಮಾತಿನಿಂದಲೇ ಉಪಚಾರ ಮಾತಿನಿಂದಲೇ ಅಪಚಾರ"
"ಮಾತಿನಿಂದಲೇ ಸರಸ, ಮಾತಿನಿಂದಲೇ ವಿರಸ."
"ಮಾತಿನಿಂದಲೇ ನಗು, ಮಾತಿನಿಂದಲೇ ಅಳು."
"ಮಾತಿನಿಂದಲೇ ಮಾತೆಯರು, ಮಾತೆಯರಿಂದಲೇ ಮಾತು."
ಹೀಗೆ ಮಾತು ಮಾತಿಂದಲೇ ಹರಡುವುದು ಗಾಳಿಮಾತು.
ಗಾಳಿ ಮಾತನ್ನ ನಂಬಿದರೇನು ಬಂತು?
ನಿಜ ಸಂಗತಿಯನ್ನ ತಿಳಿದುಕೊಂಡರೆ ಉಳಿಯುವುದು ಬಾಳನಂಟು.
ಇಲ್ಲದಿದ್ದರೆ ಕಷ್ಟಗಳು ಒದಗುವವು ನೂರೆಂಟು!
"ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು."
ಎಷ್ಟು ಸತ್ತ್ಯವಿದೆ ಅನುಭವಿಗಳ ಈ ಮಾತು!
ಹೀಗೆ ಮಾತು ಮಾತಾಡುತ್ತ ಕಾಲ ಉರುಳಿತು, ನನಗೆ ಮಾತೇ ಮರೆತು ಹೋಯಿತು!
~ಅರ್ಚನಾ ಕುರಟ್ಟಿ
No comments:
Post a Comment