
ಎಲ್ಲಿರುವಳೋ ಆ ಚೆಲುವೆ?
ಕನಸಿನಲ್ಲಿ ಕಂಡು ನಾ ಮೋಹಗೊಂಡಿರುವೆ.
ಬಿಲ್ಲಿನಂತ ಹುಬ್ಬು ಏರಿಸುತ್ತಾ,
ಮಿಂಚಿನಂತಹ ಕಣ್ಣು ಮಿಟಿಕಿಸುತ್ತ,
ಹುಸಿನಗೆಯ ಬೀರುತ್ತ ನನ್ನ ಮನಸೆಳೆದ ನಲ್ಲೆ.
ಎಲ್ಲಿರುವಳೋ ಆ ಚೆಲುವೆ?
ಮೆಲ್ಲ ಮೆಲ್ಲನೆ ಹೆಜ್ಜೆ ಇಕ್ಕುತ್ತ
ಮೆಲು ದ್ವನಿಯಲ್ಲಿ ಹಾಡುತ್ತ,
ಕೋಗಿಲೆಗೆ ಪ್ರತಿಸ್ಪರ್ಧಿ ಆ ನನ್ನ ಚೆಲುವೆ!
ಎಲ್ಲಿರುವಳೋ ಆ ಚೆಲುವೆ?
ನವಿಲಿನಂತೆ ನಾಟ್ಯವಾಡುವ ನಿರಾಭರಣ ಸುಂದರಿ
ಕೋಮಲವಾದ ಕೈಗಳಿಂದ ನನ್ನ ಕೆನ್ನೆಯ ಸ್ಪರ್ಶಿಸಿ, ಮಾಯವಾದ ಪ್ರಿಯ ಗೆಳತಿ.
ಹುಡುಕುತಿರುವೆ ಹಗಲಿರುಳು ನನ್ನ ಸಖಿಗಾಗಿ...
ಎಲ್ಲಿರುವಳೋ ಆ ಚೆಲುವೆ?
ಕನಸಿನಲ್ಲಿ ಕಂಡು ನಾ ಮೋಹಗೊಂಡಿರುವೆ.
~ಅರ್ಚನಾ ಕುರಟ್ಟಿ